ಸ್ಟುಡಿಯೋ
ಕಳೆದ ಒಂದೂವರೆ ದಶಕಗಳಿಂದ, ನಮ್ಮ ಸ್ಟುಡಿಯೊದಲ್ಲಿ ವಿವಿಧ ಪ್ರಕಾರದ ಕಲಾವಿದರಿಗೆ ಸೇವೆ ಸಲ್ಲಿಸುವ ಸಂತೋಷವನ್ನು ನಾವು ಹೊಂದಿದ್ದೇವೆ. ರೆಕಾರ್ಡಿಂಗ್, ಮಿಕ್ಸಿಂಗ್, ಮಾಸ್ಟರಿಂಗ್, ಮ್ಯೂಸಿಕ್ ಪ್ರೊಡಕ್ಷನ್, ಜಿಂಗಲ್ಸ್, ಜಾಹೀರಾತುಗಳು, ಇ ಲರ್ನಿಂಗ್, ಆಡಿಯೋ ಪುಸ್ತಕಗಳು, ಎಸ್‌ಎಫ್‌ಎಕ್ಸ್, ವಾಯ್ಸ್ ಓವರ್‌ಗಳನ್ನು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ವಿವಿಧ ಭಾಷೆಗಳಲ್ಲಿ, ಉತ್ತಮ ಆಡಿಯೊ ಸೇವೆಗಳನ್ನು ಸಂಪೂರ್ಣ ನಾವು ನೀಡುತ್ತೇವೆ.
2005 ರಲ್ಲಿ ಸ್ಥಾಪನೆಯಾದ ನಮ್ಮ ಸ್ಟುಡಿಯೊ ಸುಮಾರು 700 ಚದರ ಅಡಿ ವಿಸ್ತೀರ್ಣವಿದೆ, ಇದರಲ್ಲಿ 2 ಕಂಟ್ರೋಲ್ ರೂಮ್ ಮತ್ತು 2 ರೆಕಾರ್ಡಿಂಗ್ ಬೂತ್‌ಗಳಿವೆ. ತಾಂತ್ರಿಕವಾಗಿ ಮತ್ತು ಸಂಗೀತದ ಮುದ್ರಣದಲ್ಲೂ ಕೂಡ ಉತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲು ನಮ್ಮಲ್ಲಿ ಎಂಜಿನಿಯರ್‌ಗಳು ಮತ್ತು ಸಂಗೀತಗಾರರ ತಂಡವಿದೆ.
ಇಡೀ ಆಡಿಯೊ ರೆಕಾರ್ಡಿಂಗ್ ಸ್ಟುಡಿಯೊವನ್ನು ಉತ್ತಮವಾಗಿ ಸೌಂಡ್ ಪ್ರೂಫ್ ಮತ್ತು ಅಕೌಸ್ಟಿಕ್ ಟ್ರೀಟ್ಮೆಂಟ್ ಮಾಡಲಾಗಿದೆ. ಸ್ಟುಡಿಯೋ ಡಿಜಿಟಲ್ ರೆಕಾರ್ಡಿಂಗ್ ಇಂಟರ್ಫೇಸ್ಗಳನ್ನು ಹೊಂದಿದೆ.
ವಾಯ್ಸ್ ಓವರ್ ಗಳು ಮತ್ತು ಭಾಷಾ ಉಚ್ಚಾರಣಾ ತರಬೇತಿಯ ಮತ್ತು ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್ ನ ಹಲವು ವರ್ಕ್ ಶಾಪ್ ಗಳು ಕೂಡ ಇಲ್ಲಿ ಜರುಗುತ್ತವೆ.
ನಮ್ಮ ನಿರ್ಮಾಣಗಳು ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿಯಲ್ಲಿ ಪ್ರಶಸ್ತಿಗಳನ್ನು ಗಳಿಸಿವೆ
ಪ್ರಮಾಣೀಕೃತ ಎಂಜಿನಿಯರ್‌ಗಳು
2 ರೆಕಾರ್ಡಿಂಗ್ ಬೂತ್‌ಗಳು
ಉತ್ತಮ ಡಿಜಿಟಲ್ ರೆಕಾರ್ಡಿಂಗ್ ಸಿಸ್ಟಮ್